Tuesday, 22 August 2017

20-8-2017 ಭಾನುವಾರದಂದು ಬರಗೂರಿನಲ್ಲಿ ನಡೆದ ಕೆಂಪೇಗೌಡ ಜಯಂತ್ಯೋತ್ಸವದಲ್ಲಿ ಸನ್ಮಾನ

ಬರಗೂರಿನಲ್ಲಿ ನಡೆದ ಕೆಂಪೇಗೌಡ ಜಯಂತ್ಯೋತ್ಸವದಲ್ಲಿ ಸನ್ಮಾನ ಸ್ವೀಕರಿಸುವ ನೆಪದಲ್ಲಿ ಸುಮಾರು 15 ವರ್ಷಗಳ ನಂತರ ನನ್ನ ಶಾಲೆಗೆ ಹೋಗಿ, ನಾ ಕ್ಲಾಸಿನಲ್ಲಿ ಕೂರುತ್ತಿದ್ದ ಜಾಗದಲ್ಲಿ ಕೂತಾಗ ಏನೋ ಒಂದು ನೆಮ್ಮದಿಯ ಭಾವ. ನಾ ಪೇಪರ್ ಓದುತ್ತಿದ್ದ ಕಟ್ಟೆಯ ಮೇಲೆ ನಿಂತಾಗ ಅದೇ ಹಳೆಯ ದಿನಗಳು ಕಣ್ಣ ಮುಂದೆ ಜಾರಿದ ಅನುಭವ.
ನನ್ನ ಬಾಲ್ಯದ ಸ್ಪೂರ್ತಿಚೈತನ್ಯಗಳಲ್ಲಿ ಒಬ್ಬರಾದ, ಬಡಜನರಿಗೆ ಔಷಧಿ ಕೊಡುವುದಲ್ಲದೆ, ಮನೆ ಪರಿಸ್ಥಿತಿಯನ್ನು ವಿಚಾರಿಸಿ ಊರುಸೇರಲು ಬಸ್ ಚಾರ್ಜ್ ಅನ್ನು ಕೊಟ್ಟು ಕಳಿಸುವಂತಹ ಕರುಣಾಮಯಿ ಡಾಕ್ಟರ್ ಮುದ್ದರಂಗಪ್ಪರವರನ್ನು ಭೇಟಿ ಮಾಡಿದ ಶುಭ ಘಳಿಗೆ.  ಇನ್ನು ಹತ್ತಲವು ಖುಷಿಗೆ ಕಾರಣವಾದ ಈ ಅವಕಾಶ ಕೊಟ್ಟ ಕೆಂಪೇಗೌಡ ಜಯಂತೋತ್ಸವ ಸಮಿತಿಯ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು.

Thursday, 17 August 2017

16-6-2013 ರಂದು ನಡೆದ ಸಾಹಿತ್ಯ ರಸಧಾರ ಕಾರ್ಯಕ್ರಮ

16-6-2013 ರಂದು ಶ್ರೀಮತಿ ರೂಪರವರು ಆಯೋಜಿಸಿದ್ದ "ಸಾಹಿತ್ಯ ರಸಧಾರಾ" ಕಾರ್ಯಕ್ರಮಕ್ಕೆ ಭಾಗವಹಿಸೆಂದು ಸ್ನೇಹಿತ ಮಂಜು ದೊಡ್ಡಮನಿ ಹೇಳಿ ಕರೆದುಕೊಂಡು ಹೋಗಿದ್ದನು. ಆಶುಕವಿತೆಯಲ್ಲಿ ಸಮಾಧಾನಕರ ಬಹುಮಾನ ಪಡೆದು ನಾ ಬರೆದ ಕವನವನ್ನು ಮೊದಲ ಬಾರಿ ವಾಚಿಸಿದೆ. ಕಾವ್ಯ ವಾಚನದ ಒಳ ಹೊರಗನ್ನು ತಿಳಿಸಿಕೊಟ್ಟ ವೇದಿಕೆಯಿದು. ಮೊದಲನೇ ವೇದಿಕೆ ಮೊದಲ ವಾಚನ ಹಾಗಾಗಿ ಇದು ನನಗೆ ತುಂಬಾ ಸ್ಪೆಷಲ್ ಕಾರ್ಯಕ್ರಮ.


1-8-2017 ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿರಾ ತಾಲ್ಲೂಕು ಘಟಕದಿಂದ ಯುವ ಸಾಹಿತಿ ಎಂದು ಸನ್ಮಾನ


11-6-2017 ರಂದು ನಾಗಮಂಗಲದ ಜಿಲ್ಲಾ ಯುವ ಬರಹಗಾರರ ಬಳಗದ ವತಿಯಿಂದ ನಡೆದ ರಾಜ್ಯಮಟ್ಟದ ಕವಿಗೋಷ್ಠಿ

18-02-2017 ರಂದು ಹಂದಿಕುಂಟೆ ಗ್ರಾಮದಲ್ಲಿ

18-02-2017 ರಂದು ಹಂದಿಕುಂಟೆ ಗ್ರಾಮದಲ್ಲಿ ಜಯಕರ್ನಾಟಕ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ12-01-2017 ರಂದು ರವೀಂದ್ರ ಕಲಾಕ್ಷೇತ್ರ ನಡೆದ ಕವಿಕಾವ್ಯ ಮೇಳದಲ್ಲಿ ಕವಿತಾವಾಚನ

ರವೀಂದ್ರ ಕಲಾಕ್ಷೇತ್ರಕ್ಕೆ 50 ವರ್ಷ ತುಂಬಿದ ಹೊಸ್ತಿಲಲ್ಲಿ ಹಮ್ಮಿಕೊಂಡಿದ್ದ ಕವಿಕಾವ್ಯ ಮೇಳದಲ್ಲಿ ಕವಿತಾವಾಚನ

31 ಡಿಸೆಂಬರ್ 2016 ರಂದುಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿ